انتقل إلى وضع عدم الاتصال باستخدام تطبيق Player FM !
ಹಿತ ಶತ್ರುಗಳು…
Manage episode 294338131 series 2936246
ಒಂದು ಉದ್ಯಮದ ಬೆಳವಣಿಗೆ ಆ ಉದ್ಯಮವ ಪ್ರಾರಂಭಿಸಿದ ವ್ಯಕ್ತಿಯ ಮನೋಭಾವ ಅವಲಂಬಿಸುತ್ತದೆಂದರೇ ಸುಳ್ಳಲ್ಲ, ಉದ್ಯಮಕ್ಕೆ ಬೇಕಾದ ಶಿಸ್ತು[discipline for success] , ವ್ಯವಸ್ಥೆಯ ಪಾಲನೆ, ದೂರದೃಷ್ಟಿ,ಸಮಯಪಾಲನೆ ಕೇವಲ ಉದ್ಯಮದ ಅಂಗವಾಗಿರದೇ ಉದ್ಯಮಿಯ ಬದುಕಿನ ಭಾಗವಾಗಿರಬೇಕು.ಆದಾಗಲೇ ಉದ್ಯಮವು ನಿಂತ ನೀರಾಗದೇ ಸದಾ ಹೊಳೆಯಂತೇ ಹರಿಯುತ್ತದೇ…ಉದ್ಯಮವೆಂದರೇ ಅದೊಂದು ನಿರಂತರ ತಯಾರಿಕೆ[continous upgradation] …ಅದಕ್ಕೆ ಪರಿಪೂರ್ಣತೆ ಅನ್ನುವುದೇ ಇಲ್ಲಾ..ಪರಿಪೂರ್ಣತೆ ಹೊಂದುವ ಸಲುವಾಗಿಯೇ ದಿನಪೂರ್ತಿ ಉದ್ಯಮಿಯು ಕಷ್ಟ ಪಡುತ್ತಾನೆ. ಯಾಕೆಂದರೆ ಬದಲಾಗುವ ಕಾಲಮಾನ, ಬಂದು ಒದಗುವ ಅನಾನುಕೂಲತೆ ಗ್ರಾಹಕರ ಬೇಡಿಕೆ[customer’s expectation], ಹೀಗೆ ಉದ್ಯಮವನ್ನು ದಿನವೂ ಪರಿಪೂರ್ಣತೆಯತ್ತ ಕೊಂಡ್ಯುತ್ತಲೇ ಇರುವುದು ಉದ್ಯಮಿಯ ಕೆಲಸ. ಅದನ್ನು ಸಾಧಿಸುವುದು ಉದ್ಯಮಿಯ ಗುರಿಯಾದರೂ ಅದಕ್ಕೆ ನಿರಂತರ ತಯಾರಿಕೆ,ಸ್ವಪ್ರಯತ್ನ ಅವಶ್ಯಕ.
ಆದಾಗ್ಯೂ.., ಉದ್ಯಮಿಯ ಆಲೋಚನಾಹರಿ ಎಕಚಿತ್ತ ವಾಗೀರದೇ ಹೋದರೇ ತನ್ನ ಗುರಿಯು ಉದ್ಯಮದ ಗುರಿಯೂ ಒಂದೇ ಆಗಿರದೇ ಹೋದರೇ ಉದ್ಯಮಕ್ಕೂ ಅದರ ಕೊರತೆ ಕಾಣುತ್ತದೆ. ಉದ್ಯಮಿಯು ತಾನೇ ನಂಬಿದ ಸೈಂದಾತಿಕ ನಂಬಿಕೆಗಳು ಹಾಗೂ ಅಳವಡಿಸಿಕೊಂಡ ಅಭ್ಯಾಸಗಳು ಹಾಗೂ ಅವನ ಬಲವಾದ ನಂಬಿಕೆಗಳ ಮೇಲೆ ನಿಂತ ನಿರ್ಮಾಣ[continous upgradation of your thought process] , ಕೇವಲ ಒಂದರೇಡು ವರುಷದಲ್ಲಿ ಅದು ಪರಿಪಕ್ವಗೊಳ್ಳುವುದಿಲ್ಲಾ. ಉದ್ಯಮವುದೀರ್ಘಕಾಲದ ಆಯಸ್ಸನ್ನು ಅಪೇಕ್ಷಿಸುತ್ತದೆ. ಹೀಗಾಗಿ ಉದ್ಯಮಿಯ ಹಿತ ಶತ್ರುವೂ ಅವನ ಆಲೋಚನೆ ಹಾಗೂ ನಂಬಿಕೆಗಳಾಗಿರುತ್ತವೆ.ಉದ್ಯಮಿಯು ತಾನು ಕಲಿತ ವಿದ್ಯೆಯನ್ನು , ವ್ಯವಹಾರದ ನೈಪುಣ್ಯತೆಯನ್ನು ಮತ್ತು ಬದಲಾಗುವ ತಂತ್ರಜ್ಞಾನ ಒಡ್ಡುವ ಸವಾಲುಗಳನ್ನು ಕಾಲದಿಂದ ಕಾಲಕ್ಕೆ ಸಾಣೆ ಹಿಡಿಯುವ ಮೂಲಕ ತನ್ನ ಉದ್ಯಮದ ಅಸ್ತಿತ್ವ ಉಳಿಸಿಕೊಳ್ಳುವ ಅವಶ್ಯಕತೆಯಿದೆ.
ಬೇರೆಯವರ ಯಶಸ್ಸಿನ ಸೂತ್ರಗಳನ್ನ ಅವಲಂಬಿಸುವುದು [Using Others Success Formula] :- ಎಲ್ಲರಿಗೂ ಗೊತ್ತು ಇರುವ ವಿಷಯವೆಂದರೇ ಯಶಸ್ಸಿಗೆ ಇಂತಹುದೇ ಎಂಬ ಸೂತ್ರಗಳಿಲ್ಲಾ[there is no ready made formula for success].ಯಾವ ವ್ಯಕ್ತಿ ಯಶಸ್ವಿಯಾಗಿ ಹೊರಹೊಮ್ಮತ್ತಾನೇ ಅವನು ತೆಗೆದುಕೊಂಡ ನಿರ್ಧಾರಗಳನ್ನೇ ಯಶಸ್ಸಿನ ಸೂತ್ರಗಳು ಅನ್ನಬಹುದು.ಆದರೆ ಕೆಲವೊಂದು ಸಾರಿ ಉದ್ಯಮಿಯು ಯಾರೋ ಉದ್ಯಮದಲ್ಲಿ ಗೆದ್ದ ವ್ಯಕ್ತಿಯನ್ನೇ ಆದರ್ಶ[Role Model] ಆಗಿ ಮನದಲ್ಲಿಟ್ಟುಕೊಂಡೇ ಉದ್ಯಮ ನಡೆಸುತ್ತಾನೆ. ತನ್ನ ಉದ್ಯಮದ ಪ್ರತಿಕೂಲ ಸಂದರ್ಭಗಳಲ್ಲೂ ಗೆದ್ದ ವ್ಯಕ್ತಿಯ ಆದರ್ಶಗಳನ್ನೇ ಬಳಸುತ್ತಾನೆ.ಇದು ಖಂಡಿತಾ ತಪ್ಪಲ್ಲ. ಯಶಸ್ವಿ ಉದ್ಯಮಿಗಳ ಜೀವನ ಯಶೋಗಾಥೆ ಖಂಡಿತ ಉಪಯುಕ್ತವೇ ಆದರೇ ಅವರಂತೇ ಅನುಕರಿಸುವುದು ಖಂಡಿತಾ ತಪ್ಪು. ಅನುಕರಣೆ ಅನ್ನುವುದು ಯಾವತ್ತಿದ್ದರೂ ಕೈಕೊಡುವ ಟ್ರಿಕು[Correct Implementation Is The Key To Success]. ಯಾವುದೇ ಉದ್ಯಮದ ಯಶಸ್ಸು ಯಾರದೋ ಉದ್ಯಮದ ಯಶಸ್ಸಿನ ಸೂತ್ರಗಳನ್ನು ಅವಲಂಬಿಸಿ ಬೆಳೆಯುವುದಿಲ್ಲಾ .ಆ ಉದ್ಯಮ ಪ್ರಾರಂಭವಿಸಿರುವ ಉದ್ಯಮಿಯ ಯಶಸ್ಸಿನ್ನ ಅವಲಂಬಿಸಿರುತ್ತದೆ[Use Your Own Success Formula]. ಯಾಕೆಂದರೆ ಯಶಸ್ಸಿಗೆ ರೇಡಿಮೇಡ್ ಸೂತ್ರಗಳಿಲ್ಲಾ.., ನಾವೇ ಗಳಿಸಿದ ಅನುಭವ.., ನಮ್ಮದೆಯಾದ ಆಲೋಚನೆ. ಹಾಗೂ ತಯಾರಿ ಇದ್ದಲ್ಲಿ ಮಾತ್ರ ಉದ್ಯಮವು ಯಶಸ್ವಿಗೊಳ್ಳುತ್ತದೇ ಯಾರೋ ಹೇಳಿಕೊಟ್ಟ
ಬೀಜಮಂತ್ರವ ಮನದಲ್ಲಿಟ್ಟುಕೊಂಡು ಉದ್ಯಮವ ನಡೆಸಲು ಆಗುವುದಿಲ್ಲ. ಅದಕ್ಕೆ ಕಾರಣ ತನ್ನ ಕನಸಿಗೆ ತಾನೇ ದಾರಿ ಮಾಡಿಕೊಳ್ಳಬೇಕು. ಉದ್ಯಮಿಯು ತನ್ನ ಬದ್ಧತೆ ಹಾಗೂ ಸಂಯಮವನ್ನ
ತನ್ನ ಕಾಯಕಕ್ಕೇ ನೀಡದ್ದೇ ಆದಲ್ಲಿ ತನ್ನ ಉದ್ಯಮದ ಯಶಸ್ಸು ತಾನು ಕೈಗೊಳ್ಳೇ ನಿರ್ಧಾರದ ಮೇಲಿರುತ್ತೇ ಎಂದೂ ಮನವರಿಕೆಯಾಗುತ್ತದೆ,ಯಾರದೋ ಯಶಸ್ಸಿನ ಸಾಲು, ಉದ್ಗಾರಗಳಿಗಿಂತ ಉದ್ಯಮಿಯು ತನ್ನ ಅನುಭವಗಳಿಂದ ಯಶಸ್ಸನ್ನು ಗಳಿಸಿಕೊಳ್ಳುವುದು ಒಳಿತು..ಇಲ್ಲವೆಂದರೆ ಸ್ವನಿರ್ಧಾರ ಮೇಲೇ ಅಪನಂಬಿಕೆ ಮೂಡಿ ಪ್ರತಿಯೊಂದಕ್ಕೂ ಅವಲಂಬನೆ [Dependence] ಶುರುವಾಗುತ್ತದೇ, ಮತ್ತು ಯಾರೋ ಹೇಳಿಕೊಟ್ಟ ಸೂತ್ರಗಳು ಎಲ್ಲ ಸಮಯದಲ್ಲೂ ಯಶ ಸಿಗದೇ ಹೋಗಬಹುದು .ಉದ್ಯಮವು ಆದಷ್ಟು ಸ್ವಸಾಮರ್ಥ್ಯ ಮೇಲೇ ಬೆಳೆಯುವ ಸಂಗತಿ ಬೇರೆಯವರ ಯಶಸ್ಸಿನ ಸೂತ್ರಗಳು ಪ್ರಚೋದನೆ ನೀಡಬಹುದೇ ಹೊರತು ಉದ್ಯಮವ ಬೆಳಸಲಾರವು.
ಹಳೇ ಕಾಲದ ಯಶಸ್ಸನ್ನೇ ಅವಲಂಬಿಸುವುದು [Never Use Old Success Formula] :-ಬದಲಾವಣೆ ಜಗದ ನಿಯಮ..,ಯಾವುದು ಬದಲಾವಣೆಗೆ ಒಗ್ಗಿ ಕೊಳ್ಳುತ್ತದೊ ಅದು ಮಾತ್ರ ಬದುಕುತ್ತದೆ.ಅದಕ್ಕೆ ಉದ್ಯಮವು ಕೂಡ ಹೊರತಲ್ಲ. ಉದ್ಯಮದ ಬೆಳವಣಿಗೆಯು ಅದರ ನಿರಂತರ ಬದಲಾವಣೆಯ ಬಯಸುತ್ತಿದೆ. ಆದಾಗ್ಯೂ ಹಳೇ ಕಾಲದ ಯಶಸ್ಸುಗಳನ್ನೇ ನಂಬಿಕೊಂಡು ಉದ್ಯಮದ ನಿರ್ವಹಣೆ ಕಷ್ಟ ಸಾಧ್ಯ. ಯಾವುದೇ ಯಶಸ್ಸಿನ ಸೂತ್ರಕ್ಕೂ ವರ್ತಮಾನ ಎನ್ನುವುದು ಬಹು ಮುಖ್ಯವಾದ ಸಂಗತಿ.ವಾಸ್ತವ ಸ್ಥಿತಿಗತಿಗಳ ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡಿದರೇ ಮಾತ್ರ ಉದ್ಯಮ ನಡೆಯುತ್ತಿದೆ. ಯಶಸ್ಸಿಗೆ ರೇಡಿಮೇಡ್ ಸೂತ್ರಗಳಿಲ್ಲಾ ಎಂಬ ಮಾತು ಎಷ್ಟು ನಿಜವೋ ಹಾಗೆ ಎಲ್ಲ ಯಶಸ್ಸಿನ ಸೂತ್ರಗಳು ಎಲ್ಲ ಕಾಲಕ್ಕೂ ಹೊಂದಿಕೆಯಾಗಲಾರವು ಎಂಬುವುದು ಕೂಡ ನಿಜ.ಉದ್ಯಮದ ರಚನೆಯಿಂದ ಮಾರುಕಟ್ಟೆ ವಿಸ್ತರಿಸುವವರೆಗೂ ಒಬಿಕಾಲದ ಹಳೆಯ ಸೂತ್ರಗಳನ್ನ ಅನುಸರಿಸುವ ಉದ್ಯಮ ಕೂಡ ಒಬಿರಾಯನ ಉದ್ಯಮ ಅಂತಾ ಅನಸಿಕೊಳ್ಳುತ್ತದೇ.
35 حلقات

所有剧集
×مرحبًا بك في مشغل أف ام!
يقوم برنامج مشغل أف أم بمسح الويب للحصول على بودكاست عالية الجودة لتستمتع بها الآن. إنه أفضل تطبيق بودكاست ويعمل على أجهزة اندرويد والأيفون والويب. قم بالتسجيل لمزامنة الاشتراكات عبر الأجهزة.